ಖಳನಾಯಕನ ಗೆಟಪ್‌ನಲ್ಲಿ ಸೂತ್ರಧಾರಿ ನವರಸನ್
Posted date: 01 Fri, Dec 2023 04:22:04 PM
ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ  ನಾಯಕನಾಗಿ ನಟಿಸುತ್ತಿರುವ ಚಿತ್ರ  ಸೂತ್ರಧಾರಿ,  ಕ್ರೈಮ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ  ಕಿರಣ್ ಕುಮಾರ್  ಆಕ್ಷನ್ ಕಟ್ ಹೇಳಿದ್ದಾರೆ. ಹೊಸ ಥರದ ಹಾಡುಗಳಿಂದಲೇ ಸುದ್ದಿ ಮಾಡ್ತಿರುವ ಈ ಚಿತ್ರವನ್ನು  ಎಂಎಂಬಿ ಲೆಗೆಸಿ, ಮೈ ಮೂವಿಬಜಾರ್ ಹುಟ್ಟುಹಾಕಿದ ನಟ, ನಿರ್ದೇಶಕ ನವರಸನ್ ಅದ್ದೂರಿ ವೆಚ್ಚದಲ್ಲಿ   ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ  ಚಿತ್ರದ ಕ್ರಿಯೇಟಿವ್ ಡೈರೆಕ್ಟರ್  ಆಗಿಯೂ  ಕೆಲಸ  ಮಾಡಿದ್ದಾರೆ.  ವಿಶೇಷವಾಗಿ  ಈ ಚಿತ್ರದಲ್ಲಿ  ನಿರ್ಮಾಪಕ ನವರಸನ್ ಅವರು  ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ, ಅದೂ ಖಳನಾಯಕನ ಗೆಟಪ್‌ನಲ್ಲಿ, ನವರಸನ್ ಅವರ ಹುಟ್ಟು ಹಬ್ಬದ  ವಿಶೇಷವಾಗಿ ಅವರ ಪಾತ್ರದ ಫಸ್ಟ್ ಲುಕ್‌  ಪೋಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಆ ಲುಕ್  ಇದೀಗ ಎಲ್ಲೆಡೆ ವೈರಲ್ ಆಗಿದೆ.  ಸದ್ಯದಲ್ಲೇ ಸೂತ್ರಧಾರಿ  ಚಿತ್ರವನ್ನು ತೆರೆಗೆ ತರುವುದಾಗಿ  ನಿರ್ಮಾಪಕ ನವರಸನ್ ಅವರು ತಿಳಿಸಿದ್ದಾರೆ.  
 
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡ್ಯಾಶ್ ಸಾಂಗ್ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ದಾಖಲೆ ಬರೆದಿದೆ.  ಇದಲ್ಲದೆ ಚಂದನ್ ಶೆಟ್ಟಿ ಅವರೇ ಹಾಡಿರುವ  ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು ಎಂಬ ಹಾಡು ಕೂಡ  ವೈರಲ್  ಆಗಿದೆ, ನಾಯಕನಾಗಿ ಕಾಣಿಸಿಕೊಂಡಿರುವ ಚಂದನ್ ಶೆಟ್ಟಿ  ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು.  ದಕ್ಷಿಣ ಭಾರತದಲ್ಲಿ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ದೊಡ್ಡ ದೊಡ್ಡ ಇವೆಂಟ್‌ಗಳನ್ನು ನಡೆಸುವ ಮೂಲಕ ಹೆಸರಾಗಿರುವ ನವರಸನ್ ಅವರು ತಮ್ಮ  ಈಗಲ್ ಮೀಡಿಯಾ ಕ್ರಿಯೇಷನ್ಸ್  ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೂತ್ರಧಾರಿ ಇವರ ಬ್ಯಾನರ್ ಅಡಿಯಲ್ಲಿ  ನಿರ್ಮಾಣವಾಗುತ್ತಿರುವ  ಐದನೇ ಚಿತ್ರವಾಗಿದೆ. 
 
ಈ  ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಅವರ  ಛಾಯಾಗ್ರಹಣವಿದ್ದು,  ಸತೀಶ್ ಚಂದ್ರಯ್ಯ ಅವರ  ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.  ಚಂದನ್ ಶೆಟ್ಟಿ ಜೊತೆ ನಾಯಕಿಯಾಗಿ  ಕೃಷ್ಣ ಟಾಕೀಸ್ ಖ್ಯಾತಿಯ ಅಪೂರ್ವ ಅವರು  ನಟಿಸಿದ್ದಾರೆ. ಸಂಜನಾ ಆನಂದ್ ಈ  ಚಿತ್ರದ  ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.  ಹಿರಿಯ  ನಟ ತಬಲನಾಣಿ, ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಸೇರಿದಂತೆ   ಹಲವಾರು ಕಲಾವಿದರು  ಈ ಚಿತ್ರದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed